ಅಮೃತ ಕಲ್ಯಾಣಿ ಕರ್ನಾಟಕ ಸಂಗೀತದಲ್ಲಿ (ದಕ್ಷಿಣ ಭಾರತೀಯ ಶಾಸ್ತ್ರೀಯ ಸಂಗೀತದ ಸಂಗೀತ ಪ್ರಕಾರಗಳಲ್ಲಿ) ಸಂಯೋಜಕ ಮಹೇಶ್ ಮಹದೇವ್ ಸೃಷ್ಟಿಸಿರುವ ಒಂದು ರಾಗವಾಗಿದೆ ಸಂಗೀತ ಸಂಯೋಜಕ ಮಹೇಶ್ ಮಹದೇವ್ ಅವರು ಅನೇಕ ರಾಗಗಳನ್ನು ಸೃಷ್ಟಿಸಿದ್ದು ಈ ರಾಗವು ಕರ್ನಾಟಕ ಸಂಗೀತದ 72 ಮೇಳಕರ್ತ ರಾಗ ವ್ಯವಸ್ಥೆಯಲ್ಲಿ 65 ನೇ ಮೇಳಕರ್ತ ರಾಗವಾದ ಮೇಚಕಲ್ಯಾಣಿಯ ಜನ್ಯ ರಾಗವಾಗಿದೆ. ಇದು ಪಾಶ್ಚಾತ್ಯ ಸಂಗೀತದ ಲಿಡಿಯನ್ ಮೋಡ್‌ಗೆ ಸಮನಾಗಿರುತ್ತದೆ ಆದರೆ ಆರೋಹಣದಲ್ಲಿ ಎರಡನೇ ಮತ್ತು ಆರನೇ ಸ್ವರವನ್ನು ಬಿಟ್ಟುಬಿಡಲಾಗಿದೆ. ಈ ರಾಗವನ್ನು ಹಿಂದೂಸ್ತಾನಿ ಸಂಗೀತದಲ್ಲಿ ಅಮೃತ್ ಕಲ್ಯಾಣ್ ಎಂದೂ ಮಹೇಶ್ ಮಹದೇವ್ ಹೆಸರಿಸಿದ್ದಾರೆ. == ರಚನೆ ಮತ್ತು ಲಕ್ಷಣ == ಅಮೃತ ಕಲ್ಯಾಣಿಯು ಅಸಂಪೂರ್ಣ ರಾಗವಾಗಿದ್ದು, ಆರೋಹಣದಲ್ಲಿ ಋಷಭ ಮತ್ತು ಧೈವತವನ್ನು ಹೊಂದಿಲ್ಲ. ಇದು ಔಡವ-ಸಂಪೂರ್ಣ ರಾಗಂ (ಅಥವಾ ಓಡವ ರಾಗಂ, ಅಂದರೆ ಪೆಂಟಾಟೋನಿಕ್ ಆರೋಹಣ ಪ್ರಮಾಣ). ಇದರ ಆರೋಹಣ ಮತ್ತು ಅವರೋಹಣ ಈ ಕೆಳಗಿನಂತಿರುತ್ತದೆ. ಆರೋಹಣ : ಸ ಗ೩ ಮ೨ ಪ ನಿ೩ ಸ ಅವರೋಹಣ : ಸ ನಿ೩ ದ೨ ಪ ಮ೨ ಗ೩ ರಿ೨ ಸ ಈ ರಾಗದಲ್ಲಿ ಬಳಸಲಾಗುವ ಸ್ವರಗಳೆಂದರೆ ಷಡ್ಜ, ಚತುಶುರುತಿ ಋಷಬ, ಅಂತರ ಗಾಂಧಾರ, ಪ್ರತಿ ಮಧ್ಯಮ, ಚತುಶ್ರುತಿ ಧೈವತ, ಆರೋಹಣದಲ್ಲಿ ಕಾಕಲಿ ನಿಷಾದ, ಚತುಶ್ರುತಿ ಋಷಭ ಮತ್ತು ಚತುಶ್ರುತಿ ದೈವತ ಅವರೋಹಣ ದಲ್ಲಿ ಸೇರಿಸಲಾಗಿದೆ . ಇದು ಔಡವ - ಸಂಪೂರ್ಣ ರಾಗ == ಸಂಯೋಜನೆಗಳು == ಈ ರಾಗದಲ್ಲಿ ಸಂಯೋಜನೆ ಅಚ್ಯುತಮ್ ಕೇಶವಂ - ಮಹೇಶ್ ಮಹಾದೇವ್ ಸಂಯೋಜಿಸಿದ್ದಾರೆ, ಪ್ರಿಯದರ್ಶಿನಿ ಹಾಡಿದ್ದಾರೆ ರಾಗಪ್ರವಾಹಂ - ಗಣೇಶ್ ಕುಮಾರೇಶ್ == ಟಿಪ್ಪಣಿಗಳು == == ಉಲ್ಲೇಖಗಳು ==